Lake is Not Just a Place to Collect Water, it is An Emotion!

– Prarthana,
Parahitam Volunteer

ಗಾದೆ ಮಾತಿನಂತೆ “ಊರು ಕಟ್ಟುವ ಮೊದಲು ಕೆರೆ ಕಟ್ಟು” ಎಂದು. ಒಂದು ಊರು ಸಮೃದ್ಧಿ ಆಗಿರ ಬೇಕು ಎಂದರೆ ಊರಲ್ಲಿ ಒಂದು ಕೆರೆ ಇರಲೇ ಬೇಕು. ಕೆರೆ, ಹೊಳೆ, ನದಿ ಸುತ್ತ ಮುತ್ತ ನಾಗರೀಕತೆ ಬೆಳೆದು ನಿಂತಿತು.

ಕೆರೆಯ ನೀರು ಕುಡಿಯಲು ಹಾಗೆ ಕೃಷಿಗೆ ಮಾತ್ರ ಸೀಮಿತವಾಗಿರಲಿಲ್ಲ. ನಾನು ಚಿಕ್ಕವಳು ಇದ್ದಾಗ ನಾನು ನೋಡಿದ ಹಾಗೆ,ನಮ್ಮ ಊರಿನಲ್ಲಿ ಹೆಂಗಸರು ಚಿಕ್ಕ ಮಕ್ಕಳು ದಿನ ಬೆಳಿಗ್ಗೆ ಮನೆಯ ಕೆಲಸವನ್ನು ಮುಗಿಸಿ ಬಟ್ಟೆ, ಪಾತ್ರಗಳನ್ನು ತೊಳೆಯಲು ಕೆರೆಗೆ ಬರುತ್ತಿದ್ದರು. ಊರ ಹೆಂಗಸರ ಎಲ್ಲ ಸೇರಿ ಬಟ್ಟೆ ತೊಳೆಯುತ್ತಾ ಅವರ ಮನೆಯ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಹೀಗೆ ಸ್ನಾನ, ಬಟ್ಟೆ, ಪಾತ್ರೆ ತೊಳೆದು ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಮನೆಗೆ ತೆರಳುತ್ತಿದ್ದರು. ನಂತರ ಊರಿನ ಗಂಡಸರು ಹೊಲ ಗದ್ದೆಗಳ ಕೆಲಸ ಮುಗಿಸಿ ಸಂಜೆ ಸ್ನಾನ, ಹಾಗೆ ದನ,ಎಮ್ಮೆಗಳ ಮೈ ತೊಳೆಯುತ್ತಾ ನಮ್ಮ ಕಷ್ಟ ಸುಖ, ರಾಜಕೀಯ,ಹೀಗೆ ಎಲ್ಲ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಕೆರೆ ಎಂದರೆ ಬರೇ ನೀರು ಸಂಗ್ರಹಿಸುವ ಸ್ಥಳ ಅಷ್ಟೇ ಆಗಿರಲಿಲ್ಲ ಕೆರೆ ಊರ ಜನರ ಭಾವನೆ ಹಾಗೂ ಉಸಿರಾಗಿತ್ತು.

ಆದರೆ ಇಂದು ಕಾಲ ಬದಲಾಗಿದೆ ಕಾಲದ ಜೊತೆಗೆ ಜನರ ಮನಸ್ಥಿತಿ, ಹಾಗೆ ಪರಿಸ್ಥಿತಿ ಬದಲಾಗಿದೆ. ಈಗ ಊರಿನ ಜನರು ಪ್ರತಿ ಮನೆಯಲ್ಲೂ ಬಾವಿಯನ್ನು ಹೊಂದಿದ್ದಾರೆ ಹಾಗೆ ಕುಡಿಯಲು ಸಹ ಸಂಸ್ಕರಿಸಿದ ನೀರಿನ ಬಾಟಲು ಹಾಗೆ ಸರ್ಕಾರ ನಿರ್ಮಿಸಿದ ಕುಡಿಯುವ ಸಂಸ್ಕರಿಸಿದ ನೀರಿನ ಕೇಂದ್ರದ ನೀರನ್ನು ಬಳಸುತ್ತಾರೆ ಹಾಗೆ ಕೊಳಾಯಿ ನೀರು ಸರಬರಾಜು ಹಾಗೆ ನೀರು ಸಂಗ್ರಹಿಸುವ ಸಂಪುಗಳು ಸಹ ಇದೇ..ಹಾಗೆ ಗದ್ದೆ, ತೋಟಗಳಿಗೆ ಪ್ರತ್ಯೇಕ ಬಾವಿ ಹಾಗೆ ಕೊಳವೆ ಬಾವಿಗಳು ಜೊತೆಗೆ ನೀರಿನ ಕಾಲುವೆಗಳ ವ್ಯವಸ್ಥೆಯು ಇದೆ ಹೀಗಾಗಿ ಊರಿನ ಜನರು ಊರ ಕೆರೆಯ ಅವಲಂಬನೆ ಕಡಿಮೆ ಆಗಿದೆ. ಹಳ್ಳಿ ಹಳ್ಳಿಗಳಲ್ಲಿ ಕೆರೆಯ ಪರಿಸ್ಥಿತಿ ಹೀಗಾಗುತಿದ್ದರೆ ನಗರಗಳಲ್ಲಿ ಕೆರೆಗಳು ಪರಿಪೂರ್ಣವಾಗಿ ನಾಶವಾಗುತ್ತೀದೆ. ಜನರ ದುರಾಸೆಗೆ ಕೆರೆಗಳು ಬಲಿಯಾಗುತ್ತೀದೆ. ನಗರ ಪ್ರದೇಶದ ಅಭಿವೃದ್ಧಿ, ಆಧುನಿಕ ತಂತ್ರಜ್ಞಾನ, ಜನರ ಜೀವನ ಶೈಲಿ ಎಲ್ಲವೂ ಬದಲಾಗಿದೆ ಹಾಗೆ ನಗರದ ಅಭಿವೃದ್ಧಿ ಹೆಸರಿನಲ್ಲಿ ಕೆರೆ ಇರುವ ಜಾಗದಲ್ಲಿ ರಸ್ತೆಗಳು, ದೊಡ್ಡ ದೊಡ್ಡ ಕಂಪೆನಿಗಳು, ಬಹು ಮಹಡಿಯ ಮನೆಗಳು, ಕಟ್ಟಡಗಳು ಆಗುತ್ತಿವೆ ಹೀಗಾಗಿ ಕೆರೆಗಳು ಮಾಯವಾಗುತ್ತಿದೆ. ಇನ್ನೊಂದು ಕಡೆ ಕೆರೆಗಳಿಗೆ ತ್ಯಾಜ್ಯಗಳು ಸೇರಿ ಕೆರೆಗಳು ಮಲಿನವಾಗುತ್ತಿದೆ.

ನಮ್ಮ ಪೂರ್ವಜರು ಜನರ ಸಹಾಯಕ್ಕೆ ಕಟ್ಟಿದ ಕೆರೆಗಳನ್ನು ನಮಗಾಗಿ ನಮ್ಮ ಮುಂದಿನ ಪೀಳಿಗೆಗೆ ಉಳಿಸೋಣ ..