ಸ್ವಚ್ಛ ಬೆಂಗಳೂರಿಗೆ ಪರಹಿತಮ್ ಸೇವೆ

ನಮ್ಮ ಎನ್.ಜಿ.ಒ ವತಿಯಿಂದ ಬಿಬಿಎಂಪಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ 31-12-2023ರಂದು ಬೆಂಗಳೂರಿನ ಬಿಸಿಸಿ ಬಡಾವಣೆ ಬಸ್ ನಿಲ್ದಾಣದ ಬಳಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ನಿತ್ಯ ಕಸ ಹಾಕುತ್ತಿದ್ದ ಜಾಗವನ್ನು ಸ್ವಚ್ಛಗೊಳಿಸಿ ವಾಲ್ ಪೇಂಟಿಂಗ್ ಮೂಲಕ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು. ಇಂತಹದೊಂದು ಸಮಾಜಮುಖಿ ಕೆಲಸದ ಮೂಲಕ ಹೊಸ ವರ್ಷಾರಂಭವನ್ನು ಸಾರ್ಥಕ ರೀತಿಯಲ್ಲಿ ಪರಹಿತಮ್ ಸದಸ್ಯರು ಆಚರಿಸಿದರು.

ಸಾರ್ವಜನಿಕ ಸ್ಥಳದಲ್ಲಿ ಗೋಡೆಯ ಎದುರು ಕೆಲವು ಸ್ಥಳೀಯರು ಕಸವನ್ನು, ಪ್ರಾಣಿ ಮಾಂಸ ತ್ಯಾಜ್ಯವನ್ನು ಹಾಕುತ್ತಿದ್ದು, ಈ ಬಗ್ಗೆ ಸ್ಥಳೀಯರು ಬಿಬಿಎಂಪಿಗೆ ದೂರು ನೀಡಿದ್ದರು. ಬಳಿಕ ಎಷ್ಟು ಪ್ರಯತ್ನ ಮಾಡಿದರೂ, ದಂಡ ವಿಧಿಸಿದರೂ ಸಮಸ್ಯೆಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದ ಪಾಲಿಕೆ ಅಧಿಕಾರಿಗಳ ಜತೆಗೆ ಪರಹಿತಮ್ ಕೈ ಜೋಡಿಸಿತು. ಆ ಜಾಗವನ್ನು ತ್ಯಾಜ್ಯಮುಕ್ತವಾಗಿಸಲು ಪರಹಿತಮ್ ಫೌಂಡೇಷನ್ ಸಂಸ್ಥೆಯು ಗೋಡೆಯನ್ನು ದುರಸ್ತಿಗೊಳಿಸಿ ಅದನ್ನು ಬಣ್ಣಗಳಿಂದ, ಚಿತ್ರಗಳಿಂದ ಸಿಂಗರಿಸಿತು. ಸುಮಾರು 15 ಜನರು‌ ಭಾಗವಹಿಸಿ ಈ ಕಾರ್ಯ ಯಶಸ್ವಿಗೊಳಿಸಿದರು.

-ಚೇತನ್,ಸ್ಥಳೀಯ

ಈ ಗಾರ್ಬೇಜ್ ಪಾಯಿಂಟ್‌ನಿಂದ ನಿವಾಸಿಗಳಿಗೆ ತುಂಬಾ ಸಮಸ್ಯೆಯಿತ್ತು. ಇಲ್ಲಿ ಪ್ರಾಣಿ ಮಾಂಸ ತ್ಯಾಜ್ಯಗಳನ್ನು ಪಕ್ಕದ ಪ್ರದೇಶದಿಂದಲೂ ತಂದು ಹಾಕುತ್ತಿದ್ದರು. ಅದರಿಂದ ಉಂಟಾದ ದುರ್ಗಂಧದಿಂದ ಇಲ್ಲಿನ ನಿವಾಸಿಗಳಿಗೆ ಉಸಿರಾಡಲು ತೊಂದರೆಯಾಗಿತ್ತಿತ್ತು. ಕಳೆದ 2-3 ವರ್ಷದಿಂದ ಸತತ ಹೋರಾಟ ಮಾಡಿದ್ದೇವೆ. ಬಿ.ಬಿ.ಎಂ.ಪಿ ಸಹಯೋಗದಿಂದ ಈಗ ಸ್ವಚ್ಛವಾಗುತ್ತಿದೆ. ಜೊತೆಗೆ ಪರಹಿತಮ್ ಫೌಂಡೇಷನ್ ಸಂಸ್ಥೆಯು ಇಲ್ಲಿ ಪೇಂಟ್ ಮಾಡುತ್ತಿರುವುದು ತುಂಬಾ ಸಹಕಾರಿ. ಹೀಗೆ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಶುದ್ಧ ಗಾಳಿಯನ್ನು ಉಸಿರಾಡಬಹುದು, ನೆಮ್ಮದಿಯಿಂದಿರಬಹುದು.


– ಮುತ್ತು, ಗಾರ್ಬೇಜ್ ಉಸ್ತುವಾರಿ

ಇಲ್ಲಿ ತುಂಬಾ ಕಸ ಬೀಳುತ್ತಿತ್ತು. ಪರಹಿತಮ್ ಫೌಂಡೇಷನ್ ಇಂದ ತುಂಬಾ ಸಹಕಾರ ಆಗಿದೆ. ಬಿ.ಬಿ.ಎಂ.ಪಿ ಪರವಾಗಿ ಅವರಿಗೆ ಧನ್ಯವಾದ ಹೇಳಿತ್ತಿದ್ದೇನೆ.